ಭಾರತೀಯ ಕಾಲ ಗಣನೆ - ಬದುಕಿನ ವಿಜ್ಞಾನವಿದು...
ಭಾರತೀಯ ಕಾಲ ಗಣನೆ - ಬದುಕಿನ ವಿಜ್ಞಾನವಿದು ಡಾ.ವಿನಾಯಕ ಭಟ್ಟ ಗಾಳಿಮನೆ ಪ್ರಕೃತಿಯೇ ಒಪ್ಪದ ಜನವರಿ 01 ರಂದು ಹೊಸ ವರ್ಷ ಆರಂಭ ಆಗವುದೆಂತು ? ಡಿಸೆಂಬರ್ ತಿಂಗಳು ಬಂತು ಅಂದರೆ ಸಾಕು, ಎಲ್ಲರ ಯೋಚನೆ ಒಂದೇ..ಈಯರ್ ಎಂಡ್ ಪಾರ್ಟಿ, ಮೋಜು,ಮಸ್ತಿಗಳ ಯಾದಿ ಮಾಡಿಕೊಂಡು ಪ್ರವಾಸ ಅಂತಲೋ, ಪಾರ್ಟಿ ಅಂತಲೋ, ಅಥವಾ ಮತ್ತೇನೋ ಒಟ್ಟಿನಲ್ಲಿ ವರ್ಷಾಂತ್ಯವನ್ನು ಸಡಗರದಿಂದ ಕಳೆದು, ಹೊಸ ವರ್ಷವನ್ನು ಸಂಭ್ರಮದಿಂದ ಎದುರು ಗೊಳ್ಳುವ ಸಿದ್ಧತೆ ಜೋರಾಗಿರುತ್ತದೆ. ಅದರಲ್ಲೂ ಕಾಲೇಜ್ ವಿದ್ಯಾರ್ಥಿಗಳು, ಸೋ ಕಾಲ್ಡ್ ವಿದ್ಯಾವಂತ ಯುವ ಸಮುದಾಯ ಹಾಗೂ ನೌಕರ ವರ್ಗದ್ದು ಇದರಲ್ಲಿ ಸಿಂಹಪಾಲು ಎಂದರೆ ಅತಿಶಯೊಕ್ತಿಯಲ್ಲ. ಆತ್ಮೀಯ ಭಾರತೀಯಬಂಧುಗಳೆ, ಒಮ್ಮೆ ನಿಧಾನವಾಗಿ ಈ ಕಾಲಮಾನವನ್ನು ಗಮನಿಸಿ. ನಮ್ಮ ಜೀವನದ ಎಲ್ಲಾ ಸಾಂಸ್ಕೃತಿಕ ಸಾಂಪ್ರದಾಯಿಕ ಆಚರಣೆಗಳ ಕಾಲವನ್ನು ಸೂಚಿಸುವ ಭಾರತೀಯ ಕಾಲಗಣನೆಯ ಪ್ರಕಾರ ಹತ್ತನೇ (10) ತಿಂಗಳು ನಡೆಯುತ್ತಿದೆ. ೧.ಚೈತ್ರ, ೨. ವೈಶಾಖ, ೩. ಜ್ಯೇಷ್ಠ, ೪ .ಆಷಾಢ, ೫. ಶ್ರಾವಣ , ೬. ಭಾದ್ರಪದ, ೭.ಆಶ್ವಯುಜ, ೮. ಕಾರ್ತಿಕ ಎಂಬ ಹೆಸರುಗಳ (ಆ ಹೆಸರಿಗೂ ಕಾರಣ ಇದೆ - ಚಿತ್ರಾ ವಿಶಾಖಾ...