Posts

ಭಾರತೀಯ ಕಾಲ ಗಣನೆ - ಬದುಕಿನ ವಿಜ್ಞಾ‌ನವಿದು...

 ಭಾರತೀಯ ಕಾಲ ಗಣನೆ - ಬದುಕಿನ ವಿಜ್ಞಾನವಿದು                                           ಡಾ.ವಿನಾಯಕ ಭಟ್ಟ ಗಾಳಿಮನೆ ಪ್ರಕೃತಿಯೇ ಒಪ್ಪದ ಜನವರಿ 01 ರಂದು ಹೊಸ ವರ್ಷ ಆರಂಭ ಆಗವುದೆಂತು ? ಡಿಸೆಂಬರ್ ತಿಂಗಳು ಬಂತು‌ ಅಂದರೆ ಸಾಕು, ಎಲ್ಲರ ಯೋಚನೆ ಒಂದೇ..ಈಯರ್ ಎಂಡ್ ಪಾರ್ಟಿ, ಮೋಜು,ಮಸ್ತಿಗಳ ಯಾದಿ‌ ಮಾಡಿಕೊಂಡು ಪ್ರವಾಸ ಅಂತಲೋ, ಪಾರ್ಟಿ ಅಂತಲೋ, ಅಥವಾ ಮತ್ತೇನೋ ಒಟ್ಟಿನಲ್ಲಿ‌ ವರ್ಷಾಂತ್ಯವನ್ನು ಸಡಗರದಿಂದ ಕಳೆದು, ಹೊಸ ವರ್ಷವನ್ನು ಸಂಭ್ರಮದಿಂದ ಎದುರು ಗೊಳ್ಳುವ ಸಿದ್ಧತೆ ಜೋರಾಗಿರುತ್ತದೆ. ಅದರಲ್ಲೂ  ಕಾಲೇಜ್ ವಿದ್ಯಾರ್ಥಿಗಳು, ಸೋ ಕಾಲ್ಡ್ ವಿದ್ಯಾವಂತ ಯುವ ಸಮುದಾಯ ಹಾಗೂ ನೌಕರ ವರ್ಗದ್ದು  ಇದರಲ್ಲಿ ಸಿಂಹಪಾಲು ಎಂದರೆ ಅತಿಶಯೊಕ್ತಿಯಲ್ಲ. ಆತ್ಮೀಯ ಭಾರತೀಯಬಂಧುಗಳೆ,  ಒಮ್ಮೆ ನಿಧಾನವಾಗಿ ಈ‌ ಕಾಲಮಾನವನ್ನು ಗಮನಿಸಿ.  ನಮ್ಮ ಜೀವನದ ಎಲ್ಲಾ ಸಾಂಸ್ಕೃತಿಕ ಸಾಂಪ್ರದಾಯಿಕ ಆಚರಣೆಗಳ ಕಾಲವನ್ನು  ಸೂಚಿಸುವ ಭಾರತೀಯ ಕಾಲಗಣನೆಯ ಪ್ರಕಾರ   ಹತ್ತನೇ (10) ತಿಂಗಳು ನಡೆಯುತ್ತಿದೆ.   ೧.ಚೈತ್ರ, ೨. ವೈಶಾಖ, ೩. ಜ್ಯೇಷ್ಠ, ೪ .ಆಷಾಢ, ೫. ಶ್ರಾವಣ , ೬. ಭಾದ್ರಪದ, ೭.ಆಶ್ವಯುಜ, ೮. ಕಾರ್ತಿಕ ಎಂಬ ಹೆಸರುಗಳ (ಆ ಹೆಸರಿಗೂ ಕಾರಣ ಇದೆ - ಚಿತ್ರಾ ವಿಶಾಖಾ...

ಆದರ್ಶ ಪುತ್ರ ಮೋದೀ ಜೀ

 *ಸ ಜಾತೋ ಯೇನ ಜಾತೇನ ಯಾತಿ ವಂಶಃ ಸಮುನ್ನತಿಮ್*| ವಂಶವೊಂದು ಯಾರ ಜನ್ಮದಿಂದ ಸಾರ್ಥಕತೆಯನ್ನು ಪಡೆಯುತ್ತದೋ‌,‌ಅವನ ಜನ್ಮ ಈ ಪ್ರಪಂಚದಲ್ಲಿ ಅರ್ಥಪೂರ್ಣ. ಅಂತಹ ವ್ಯಕ್ತಿಗೆ ಜನ್ಮ ಕೊಟ್ಟ ಮಾತಾಪಿತೃಗಳ ಬದುಕೂ ಅಷ್ಟೇ ಸಾರ್ಥಕ. ಮಕ್ಕಳೇ ಇಲ್ಲದ ಕೌಸಲ್ಯೆಗೆ ಸಾಕ್ಷಾತ್ ಶ್ರೀಮನ್ನಾರಾಯಣನೇ ಮಗನಾಗಿ ಜನಿಸಿದ್ದ.  ತನ್ನ ಸಾವನ್ನು ಎದುರಿಸಲಾರದ ಕಂಸನು, ದೇವಕಿ ಹಡೆದ ಏಳು ಶಿಶುಗಳನ್ನು ಜನಿಸಿದಾಕ್ಷಣ ನಿರ್ದಯೆಯಿಂದ ಹತ್ಯೆ ಮಾಡಿದ್ದ. ಅಂತಹ ಕಂಸನ ಕಣ್ಣಿಗೆ ಮಣ್ಣೆರಚಿ ದೇವಕಿಯ ಗರ್ಭಾಂಬುಧಿಯಿಂದ ಅದೇ ನಾರಾಯಣ ಕೃಷ್ಣಾಭಿಧಾನದಿಂದ ಅವತರಿಸಿದ್ದ‌. ಇವರೀರ್ವರ ಜನ್ಮದಿಂದ ಆ ಎರಡೂ ವಂಶ ಗೌರವಾದರ ಪಡೆದು ಲೋಕೋತ್ತರ ಕೀರ್ತಿಗೆ ಪಾತ್ರವಾಯಿತು. ಧರ್ಮ ಸಂಸ್ಥಾಪನೆಗೆ ತಾನು ಮತ್ತೆ ಮತ್ತೆ ಪುಣ್ಯವಂತರ ಗರ್ಭದಿಂದ ಅವತರಿಸುವೆ ಎಂದು ಘಂಟಟಘೋಷವಾಗಿ‌ ನುಡಿದಿದ್ದ. ರಾಮನನ್ನು ಮತ್ತು ಕೃಷ್ಣನನ್ನು ಹಡೆದ, ಪಡೆದ ಆ ತಾಯಿಯರು ನವಮಾಸಪರ್ಯಂತ  ತಮ್ಮ ಉದರದಲಿ ಧರಿಸಿದ್ದ ಕಾರಣದಿಂದ ತಮ್ಮ ಗರ್ಭವನ್ನೇ ದೇವರ ಗರ್ಭಗುಡಿಯನ್ನಾಗಿಸಿಕೊಂಡರು ಹಾಗೂ ಸಾರ್ಥಕತೆಯನ್ನೂ ಪಡೆದರು. ವಂಶ ಹಾಗೂ ತಾಯಿ ತಂದೆಯರ ಹೆಸರು ಸ್ಥಿರವಾಯಿತು, ಚಿರವಾಯಿತು. ಹೀರಾ ಬೇನ್ ಎಂಬ ದೈವವನ್ನೇ  ಹೊತ್ತು, ಹೆತ್ತ  ಓ ಅಮ್ಮಾ, ವರ್ತಮಾನ ಕಲಿಯುಗದ ಈ ಕಾಲದಲ್ಲಿ ಅದೇ ತೆರನಾದ ವ್ಯಕ್ತಿತ್ವ ಹೊಂದಿ ದೇಶ ಕಾಯುವ ಚೌಕಿದಾರನಿಗೆ ಒಂಭತ್ತು ತಿಂಗಳು ನಿನ್ನ ಉದರದಲ್ಲಿ  ನೀ ನ...

ವೈಶಂಪಾಯನ ತೀರ ಬೆಂಬಲಿಸಿ

 ಪ್ರಥಮವಾಗಿ ರಮೇಶ ಬೇಗಾರ ಎಂಬ ಕನಸುಗಾರರು ಹಾಗೂ ಅವರ ಪೂರ್ಣ ತಂಡಕ್ಕೆ,  ಈ ಪ್ರಯತ್ನಕ್ಕೆ ಸಮಗ್ರ ಯಕ್ಷಗಾನ ಆರಾಧಕರ ಪರವಾಗಿ ಅಭಿವನ್ದನೆಗಳು ಅಭಿನಂದನೆಗಳು. .... ಇದೀಗ ನಮ್ಮ ಸರದಿ... ಯಕ್ಷಗಾನ ಅಭಿಮಾನಿಗಳೆಲ್ಲರ ವಾಟ್ಸಾಪ್ ಸ್ಟೇಟಸ್ ಹಾಗೂ  Facebook. ನಲ್ಲಿ ಪೋಸ್ಟ್ ಮಾಡಿ. ಯಕ್ಷಗಾನವನ್ನಾಧರಿಸಿದ ಈ ಚಿತ್ರವನ್ನು ಪ್ರೋತ್ಸಾಹಿಸೋಣ. ನಿರ್ಮಾಪಕರ ಹಾಗೂ ನಿರ್ದೇಶಕರ ಈ ಸತ್ಕಾರ್ಯಕ್ಕೆ ನಮ್ಮ ಬೆಂಬಲ ನೀಡೋಣ. ನಮಗೆ ನಾವೆ, ಗೋಡೆಗೆ ಮಣ್ಣು. ಪ್ರಚಾರ ಅಭಿಯಾ‌ನ ನಿಮ್ಮಿಂದಲೇ ಆರಂಭವಾಗಲಿ. ಹೆಚ್ಚು ಚಿತ್ರಮಂದಿರ ಸಿಗುವಂತಾಗಲಿ. ಮಲೆನಾಡು ಕರಾವಳಿಯ ಹೆಮ್ಮೆ ಯಕ್ಷಗಾನ ‌ ಇದೀಗ  ಯಕ್ಷಗಾನ ಉಸಿರಾಡುವ ನಾವು, ಈ  ಸಿನೆಮಾವನ್ನು ನೋಡುವ ಮುಖೇನ ಈ ಪ್ರಯತ್ನ ಕ್ಕೆ ಬೆಂಬಲ ನೀಡಬೇಕಿದೆ..